ಶಿಕ್ಷಕರ ದಿನಾಚರಣೆ ಸನ್ಮಾನ
ಛಾಯಾಚಿತ್ರ ಗ್ಯಾಲರಿ
ತೀರ್ಥಹಳ್ಳಿಯ ಗಾಯತ್ರಿ ಜ್ಯೂವೆಲ್ಲರ್ಸ್ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಮ್ಮ ಎಸ್.ವಿ.ಎಸ್ ಪ್ರೌಢಶಾಲೆ ಅಗುಂಬೆಯ ಗೌರವಾನ್ವಿತ ಶಿಕ್ಷಕರಾದ ಶ್ರೀ ವಾಸುದೇವ್ ಅವರು ಸನ್ಮಾನಿಸಲ್ಪಟ್ಟಿರುವುದು ನಮಗೆ ಅತ್ಯಂತ ಸಂತೋಷ ಮತ್ತು ಹೆಮ್ಮೆಯ ಸಂಗತಿಯಾಗಿದೆ.
ಶಿಕ್ಷಣಾಧಿಕಾರಿ ಮಂಜುನಾಥ್ ಅವರಿಂದ ಉದ್ಘಾಟನೆಗೊಂಡ ಈ ವಿಶೇಷ ಕಾರ್ಯಕ್ರಮದಲ್ಲಿ, ಕ್ಷೇತ್ರಾದ್ಯಂತ ಉತ್ತಮ ಸೇವೆ ಸಲ್ಲಿಸಿದ ೧೩ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ವಾಸುದೇವ್ ಅವರನ್ನು ೨೦೨೬-೨೭ನೇ ಸಾಲಿನ "ಉತ್ತಮ ಶಿಕ್ಷಕ" ಎಂದು ಗುರುತಿಸಿ ಸನ್ಮಾನಿಸಲಾಯಿತು. ಸಮಾಜಕ್ಕೆ ಶಿಕ್ಷಕರ ಸೇವೆ ಅಪಾರವಾಗಿದ್ದು, ಸಾಧಕರನ್ನು ಗೌರವಿಸುವುದು ಹೆಮ್ಮೆಯ ವಿಷಯ ಎಂದು ಗಾಯತ್ರಿ ಜ್ಯೂವೆಲ್ಲರ್ಸ್ ಮಾಲೀಕರಾದ ಅನಂತ ಪದ್ಮನಾಭ ಆಚಾರ್ಯ ತಿಳಿಸಿದರು.
ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದ ಶ್ರೀ ವಾಸುದೇವ್ ಅವರಿಗೆ ನಮ್ಮ ಶಾಲಾ ಕುಟುಂಬದ ಪರವಾಗಿ ಹಾರ್ದಿಕ ಅಭಿನಂದನೆಗಳು. ಅವರ ಈ ಸಾಧನೆ ನಮ್ಮ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗೆ ನಿರಂತರ ಪ್ರೇರಣೆಯಾಗಿದೆ.